* * * * * * HASSAN DISTRICT POLICE

Saturday, November 18, 2017

PRESS NOTE : 18-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 18-11-2017.

ಅಕ್ರಮವಾಗಿ ಮರಳು ತುಂಬುತ್ತಿದ್ದ 4 ಜನರ ಬಂಧನ, ಮರಳು ಸಮೇತ ಮಹೇಂದ್ರ ಪಿಕ್ಅಪ್ ವಾಹನ ವಶ:        ದಿನಾಂಕ: 17-11-2017 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ, ಕಿತ್ತಗಳಲೆ ಗ್ರಾಮದ ಹತ್ತಿರ ಹರಿಯುತ್ತಿರುವ ಹೇಮಾವತಿ ಹೊಳೆಯ ಹಿನ್ನಿರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆಂದು ಶ್ರೀ ಇ.ವಿ. ವಿನಯ್, ಪಿಐ ಆಲೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ನೋಡಲಾಗಿ ಕೆಎ-21 ಬಿ 4461 ರ ಮಹೇಂದ್ರ ಪಿಕ್ಆಪ್ ವಾಹನಕ್ಕೆ ಮರಳು ಸಾಗಿಸುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಚಂದನ ಬಿನ್ ನಾಗೇಶ್, 24 ವರ್ಷ, 2) ಕುಮಾರ ಬಿನ್ ರಾಜಯ್ಯ, 22 ವರ್ಷ 3) ಚೇತನ@ಚೇತನ್ಕುಮಾರ್ ಬಿನ್ ನಾಗೇಶ್, 23 ವರ್ಷ, ಮೂವರು ಹೇರಗಳಲೆ ಗ್ರಾಮ, ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು 4) ಮಿಥನ ಬಿನ್ ಲೇಟ್ ಪ್ರಸನ್ನ, 19 ವರ್ಷ, ಮಲ್ಲಾಪುರ ಗ್ರಾಮ, ಕೆ. ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ ಮಹೇಂದ್ರ ಪಿಕ್ಆಪ್ ವಾಹನವನ್ನು ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

Friday, November 17, 2017

PRESS NOTE : 17-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 17-11-2017
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಾಚರಣೆ
ಕನ್ನಕಳವು ಪ್ರಕರಣದ ಆರೋಪಿ 2 ವರ್ಷದ ನಂತರ ಬಂಧನ
                            
      ಅರಸೀಕೆರೆ ನಗರ ಪೊಲೀಸ್ ಠಾಣೆ ಮೊ.ನಂ 229/12, 282/12, 208/13, 41/13, 33/13, 207/13, 209/13 ರಲ್ಲಿ ಎಲ್ ಪಿಸಿ ಪ್ರಕರಣಗಳಲ್ಲಿ ಸುಮಾರು 4 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಲ್‌ ಪಿ ಆರ್‌  ಪ್ರಕರಣದ ಆರೋಪಿಯಾದ ಮಣಿಕಂಠ @ ಮಣಿ ಬಿನ್ ನರಸಿಂಹ 33 ವರ್ಷ ಬಳೆಗಾರ ಜನಾಂಗ ಕೂಲಿ ಕೆಲಸ ಲಾಯಲಾ ಗ್ರಾಮ ದಕ್ಷಿಣ ಕನ್ನಡ ಜಿಲ್ಲೆ. ಹಾಲಿ ವಿಷ್ಣುನಗರ ನೀರಚಲ್ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ. ಈತನನ್ನು ದಿನಾಂಕ: 16/11/2017 ರಂದು ಪತ್ತೆ ಮಾಡಿದ್ದು ಈ ಆರೋಪಿಯ ಮೇಲೆ  ಹಾಸನ ಜಿಲ್ಲೆಯ ಅರಸೀಕೆರೆ ನಗರ ಠಾಣೆಯ 7 ಪ್ರಕರಣಗಳು, ಬಂಟ್ವಾಳ, ಕುಶಾಲನಗರ, ಮಂಗಳೂರು ಗ್ರಾಮಾಂತರ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು ಆಸಾಮಿಯು ಕೇರಳ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದು, ಈ ಆರೋಪಿಯನ್ನು ಪತ್ತೆಹಚ್ಚಲು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಪುರವಾಡ್, ಐಪಿಎಸ್ ರವರು, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜ್ಯೋತಿವೈdನಾಥ್, ರವರು ಹಾಗೂ  ಅರಸೀಕೆರೆ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸದಾನಂದ ಅ ತಿಪ್ಪಣ್ಣ, ರವರು  ಅರಸೀಕೆರೆ ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಶ್ರೀ ಸಿದ್ದರಾಮೇಶ್ವರ ಎಸ್  ಹಾಗೂ ಅರಸೀಕೆರೆ ಗ್ರಾಮಾಂತರ ಠಾಣಾ ಪಿ.ಎಸ್.²æà ಪುರುಷೋತ್ತಮ್.ಜಿ ರವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.   

        ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಪುರ್ವಾಡ್, ಐ.ಪಿ.ಎಸ್ ರವರ ಆದೇಶದಂತೆ ಶ್ರೀ ಸದಾನಂದ ಅ ತಿಪ್ಪಣ್ಣವರ ಡಿವೈ.ಎಸ್.ಪಿ. ಅರಸೀಕೆರೆ ಉಪ-ವಿಭಾಗ  ಇವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ದರಾಮೇಶ್ವರ, ಸಿಪಿಐ ಅರಸೀಕೆರೆ ಗ್ರಾಮಾಂತರ ವೃತ್ತ ಪೊಲೀಸ್ ಇನ್ಸ್ಪೆಕ್ಟರ್ರವರ ನೇತೃತ್ವದಲ್ಲಿ ಅರಸೀಕೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಶ್ರೀ ಜಿ ಪುರುಷೊತ್ತಮ್ ಹಾಗೂ ಸಿಬ್ಬಂದಿಗಳಾದ ಹೆಚ್ಸಿ-243 ಹೀರಾಸಿಂಗ್, ಹೆಚ್ಸಿ-262 ಶಿವಕುಮಾರನಾಯ್ಕ, ಪಿಸಿ-422 ರವಿ, ಪಿಸಿ-243 ಮಂಜುನಾಥ್ ಎ,ಪಿಸಿ-279  ಪ್ರದೀಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಎ,ಪಿ,ಸಿ. ಪೀರ್ ಖಾನ್ ರವರುಗಳು ಸದರಿ ಎಲ್ಪಿಆರ್ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿರುತ್ತಾರೆ.
ಗಂಡಸು ಕಾಣೆ
     ದಿನಾಂಕ: 15-11-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಕೆ. ಗುಂಡೇಗೌಡನ ಕೊಪ್ಪಲು ಗ್ರಾಮದ ವಾಸಿ ಶ್ರೀ ನಾಗರಾಜ್, ರವರು ಕಾರು ಚಾಲಕರಾಗಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ನಾಗರಾಜ್, ರವರ ಪತ್ನಿ ಶ್ರೀಮತಿ ವೀಣಾ ನಾಗರಾಜ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀ ನಾಗರಾಜ್, 50 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.

Thursday, November 16, 2017

PRESS NOTE : 16-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 16-11-2017.
ಜೂಜಾಡುತ್ತಿದ್ದ ಆರು ಜನರ ಬಂಧನ, ಬಂಧಿತರಿಂದ ಸುಮಾರು 4,515/- ನಗದು ವಶ:
        ದಿನಾಂಕ: 15-11-2017 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ದೇಖ್ಲಾ ಗ್ರಾಮದ ಉಮೇಶಚಾರ್, ರವರ ಮನೆಯ ಮುಂದಿನ ಹೊರಾಂಡದಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ಜಗದೀಶ್, ಪಿಎಸ್ಐ ಸಕಲೇಶಪುರ ಗ್ರಾಮಾಂತರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಇಸ್ಮಾಯಲ್ ಬಿನ್ ಹಸೈನರ್, 40 ವರ್ಷ,ಕೌಡ್ಲಹಳ್ಳಿ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 2) ಉಮೇಶಚಾರಿ ಬಿನ್ ಕೇಶವಚಾರ್, 56 ವರ್ಷ, ದೇಖ್ಲಾ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 3) ಮೊಹಮದ್ ಅಶ್ರಫ್ ಬಿನ್ ಯೂಸಫ್, 37 ವರ್ಷ, ಆಟೋ ಡ್ರೈವರ್, ದೇಖ್ಲಾ ಗ್ರಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 4) ರವೀಂದ್ರ ಬಿನ್ ಮೋನಾಚಾರಿ, 43 ವರ್ಷ, ದೇಖ್ಲಾ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 5) ವಾಸುಮೂತರ್ಿ ಬಿನ್ ರಾಮಪ್ಪಗೌಡ, 53 ವರ್ಷ, ನಡಹಳ್ಳಿ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 6) ಆದಂ ಬಿನ್ ಮೊಹಮದ್, 48 ವರ್ಷದೇಖ್ಲಾ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 4,515/- ನಗದನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಮಟ್ಕಾ-ಜೂಜು ಅಡ್ಡೆ ಮೇಲೆ ದಾಳಿ ಓರ್ವನ ಬಂಧನ, ಬಂಧಿತನಿಂದು ಸುಮಾರು 1,300/- ನಗದು ವಶ:
     ದಿನಾಂಕ: 15-11-2017 ರಂದು ಸಂಜೆ 4-15 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಸಕರ್ಾರಿ ಆಸ್ಪತ್ರೆ ಪಂಚರ್ ಅಂಗಡಿ ಹತ್ತಿರ  ಮಟ್ಕಾ- ಜೂಜಾಟಾಡುತ್ತಿದ್ದಾರೆಂದು ಶ್ರೀ ಕೆ. ಪ್ರಭಾಕರ್, ಪಿಐ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ 1 ರೂ 80 ರೂಪಾಯಿ ಕೊಡುವುದಾಗಿ ಮಟ್ಕಾ-ಜೂಜಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಇಲಿಯಾಸ್ ಪಾಷ ಬಿನ್ ಅನ್ವರ್ ಸಾಬ್, 27 ವರ್ಷ, ಲಕ್ಷ್ಮೀಪುರ ಬಡಾವಣೆ, ಅರಸೀಕೆರೆ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,300/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹುಡುಗಿ ಕಾಣೆ
     ದಿನಾಂಕ: 14-11-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಮೂಡಲಹಿಪ್ಪೆ ಗ್ರಾಮದ ವಾಸಿ ಶ್ರೀ ರವಿ ರವರ ಮಗಳು ಕು|| ಮಧುರ, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವುದಿಲ್ಲ, ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಮಧುರಳ ತಂದೆ ಶ್ರೀ ರವಿ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಮಧುರ ಬಿನ್ ರವಿ, 20 ವರ್ಷ, 5 ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-273308ಕ್ಕೆ ಸಂಪರ್ಕಿಸುವುದು.Wednesday, November 15, 2017

PRESS NOTE : 15-11-2017

         ಪತ್ರಿಕಾ ಪ್ರಕಟಣೆ            ದಿನಾಂಕ: 15-11-2017.
ಕಾರು ಆಪೇ ಗೂಡ್ಸ್ ಆಟೋ ರಿಕ್ಷಾಕ್ಕೆ ಡಿಕ್ಕಿ, ಗೂಡ್ಸ್ ವಾಹನದ ಚಾಲಕ ಸಾವು            ದಿನಾಂಕ: 15-11-2017 ರಂದು ಬೆಳಗಿನ ಜಾವ 3-30 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ಕುಣಿಗಲ್ನ ಜನತಾ ಕಾಲೋನಿ ವಾಸಿ ಶ್ರೀ ಪ್ರದೀಪ, ರವರು ಸಂಬಂಧಿಕರಾದ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಗ್ರಾಮದ ವಾಸಿ ಶ್ರೀ ರಾಜು, ರವರ ಬಾಬ್ತು ಕೆಎ-06 ಡಿ-3841 ರ ಆಪೇ ಗೂಡ್ಸ್ ಆಟೋ ರಿಕ್ಷಾವನ್ನು ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಟೌನ್, ಎನ್ಹೆಚ್-75 ಬಿ.ಎಂ. ರಸ್ತೆ, ಬ್ಯಾಡರಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-42 ಎಂ-7665ರ ಇನ್ನೋವಾ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಪೇ ಗೂಡ್ಸ್ ಆಟೋ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪ್ರದೀಪ ಬಿನ್ ಲೇಟ್ ನಾರಾಯಣ, 23 ವರ್ಷ, ಕುಣಿಗಲ್ನ ಜನತಾ ಕಾಲೋನಿ, ಮಂಡ್ಯ ಜಿಲ್ಲೆ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ರಾಜು, ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

Tuesday, November 14, 2017

PRESS NOTE : 14-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 14-11-2017.
ಜೂಜಾಡುತ್ತಿದ್ದ 4 ಜನರ ಬಂಧನ, ಬಂಧಿತರಿಂದ ಸುಮಾರು 2,950/- ನಗದು ವಶ:
        ದಿನಾಂಕ: 13-11-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ದೊಡ್ಡಕೋಡಿಹಳ್ಳಿ ಗ್ರಾಮದ ಸಮೀಪವಿರುವ ಸೂರನಾಯಕನಹಳ್ಳಿ ಬಸ್ ನಿಲ್ದಾಣದ ಹತ್ತಿರ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ರೇಣುಕಪ್ರಸಾದ್, ಪಿಎಸ್ಐ, ಹಳೇಬೀಡು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ರಾಜಣ್ಣ ಬಿನ್ ಶಾಂತಯ್ಯ, 48 ವರ್ಷ, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 2) ಧನಂಜಯಮೂತರ್ಿ ಬಿನ್ ರಂಗೇಗೌಡ, 41 ವರ್ಷ, ಕಬ್ಬಿಗರಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 3) ಹರಳೇಗೌಡ ಬಿನ್ ಹಲಗೇಗೌಡ, 68 ವರ್ಷ, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 4) ತಿಮ್ಮನಾಯ್ಕ್ ಬಿನ್ ರಾಮನಾಯ್ಕ್, 70 ವಷ್, ದೊಡ್ಡಕೋಡಿಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಟ್ಟಿದ್ದ ಸುಮಾರು 2950/- ನಗದನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಟ್ರ್ಯಾಕ್ಟರ್ ಮರಳು ತುಂಬುತ್ತಿದ್ದ ಇಬ್ಬರ ಬಂಧನ, ಟ್ರ್ಯಾಕ್ಟರ್ ಸಮೇತ ಮರಳು ವಶ:
      ದಿನಾಂಕ: 13-11-2017 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕೆ. ಹೊಸಕೋಟಿ ಹೋಬಳಿ, ಶಿರಗಾವರ ಗ್ರಾಮದ ಹತ್ತಿರ ಹರಿಯುತ್ತಿರುವ ಹೇಮಾವತಿ ಹೊಳೆಯ ಹಿನ್ನೀರಿನಲ್ಲಿ ಕೆಎ-13 ಟಿ 7052, ಕೆಎ-46-ಟಿ-3462 ರ ಟ್ರ್ಯಾಕ್ಟರ್ಗೆ ಮರಳು ತುಂಬುತ್ತಿದ್ದಾರೆಂದು ಶ್ರೀ ಇ.ವಿ. ವಿನಯ್, ಪಿಐ, ಆಲೂರು ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಟ್ರ್ಯಾಕ್ಟರ್ಗೆ ಮರಳು ತುಂಬುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಬಸವರಾಜು ಬಿನ್ ಕೆಂಚೇಗೌಡ, 33 ವರ್ಷ, ಸಿರಗಾವರ ಕೆ.ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು 2) ರಘು@ರವಿ ಬಿನ್ ತಮ್ಮೇಗೌಡ, 33 ವರ್ಷ, ಕಡುವಿನ ಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಟ್ರ್ಯಾಕ್ಟರ್ ಸಮೇತ ಮರಳನ್ನು ಅಮಾನತ್ತುಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.