* * * * * * HASSAN DISTRICT POLICE

Wednesday, February 21, 2018

PRESS NOTE 21-02-2018
                    ಪತ್ರಿಕಾ ಪ್ರಕಟಣೆ         ದಿನಾಂಕ:21-02-2018
ಟ್ರ್ಯಾಕ್ಟರ್ ಪಲ್ಟಿ, ಚಾಲಕ ಸಾವು
       ದಿನಾಂಕ: 20-02-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಹೊಸಕೊಪ್ಪಲು ಗ್ರಾಮದ ವಾಸಿ ಶ್ರೀ ಸ್ವಾಮಿಗೌಡ, ರವರು ಜೊತೆಯಲ್ಲಿ ಕೆಎ-46 2167 ರ ಟ್ರ್ಯಾಕ್ಟರ್ ನಲ್ಲಿ ರಸ್ತೆ ಕಾಮಗಾರಿ ಕೆಲಸಕ್ಕೆಂದು ಕಬ್ಬಿಣದ ರಾಡುಗಳನ್ನು ತುಂಬಿಕೊಂಡು ಜೊತೆಯಲ್ಲಿ ಸಕಲೇಶಪುರ ತಾಲ್ಲೂಕು, ಹೊನಾಟಲು ಅರಿಣಿ ಗ್ರಾಮದ ವಾಸಿ ಹೂವಣ್ಣ ರವರೊಂದಿಗೆ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಮಂಕನಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಟ್ರ್ಯಾಕ್ಟರನ್ನು  ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ರಸ್ತೆಯ ಪಕ್ಕ ಹೊಂಡಕ್ಕೆ ಪಲ್ಟಿಯಾದ ಪರಿಣಾಮ ಶ್ರೀ ಸ್ವಾಮಿಗೌಡ  ಬಿನ್ ಪ್ರೇಮಗೌಡ, 48 ವರ್ಷ, ಹೊಸಕೊಪ್ಪಲು ಗ್ರಾಮ, ಬೆಳಗೊಡು ಹೋಬಳಿ, ಸಕಲೇಶಪುರ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಶ್ರೀ ಹೂವಣ್ಣ, ರವರಿಗೆ ಸಣ್ಣ-ಪುಟ್ಟ ರಕ್ತಗಾಯಗಳಾಗಿರುತ್ತದೆಂದು  ರಸ್ತೆ ಕಾಮಗಾರಿ ಗುತ್ತಿಗೆದಾರರ ಶ್ರೀ ಎ.ಹೆಚ್. ಅಬೂಬ್ಕರ್, ರವರು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
        ದಿನಾಂಕ: 17-02-2018 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಸಕಲೇಶಪುರ ಪಟ್ಟಣದ ಸರಸ್ವತಿಪುರಂ ಬಾಳಗದ್ದೆ ಬಡಾವಣೆ ವಾಸಿ ಶ್ರೀ ಶಿವಣ್ಣ, ರವರ ಮಗಳು ಕು|| ಸೌಮ್ಯ, ಹಿಮಂತ್ ಸಿಂಗ್ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸೌಮ್ಯಳ ತಂದೆ ಶ್ರೀ ಶಿವಣ್ಣ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸೌಮ್ಯ ಬಿನ್ ಶಿವಣ್ಣ, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173- 44100 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ
        ದಿನಾಂಕ:10-02-2018 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಪೇಟೆ ಬಾಣಾವರದ ವಾಸಿ ಶ್ರೀ ಗಯಾಜ್ ಅಹಮದ್, ರವರ ಮಗಳು ಕು|| ಸುಮಯ್ಯತಸ್ಲಿಂ, ಚಿಕ್ಕಿಮಗಳೂರು ಜಿಲ್ಲೆ, ಬಿರೂರು ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಸುಮಯ್ಯತಸ್ಲಿಂಳ ತಂದೆ ಗಯಾಜ್ ಅಹಮದ್, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸುಮಯ್ಯ ತಸ್ಲಿಂ ಬಿನ್ ಗಯಾಜ್ ಅಹಮದ್, 21 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಹಿಂದಿ ಮತ್ತು ಕನ್ನಡ ಭಾಷೆ ಮಾತನಾಡುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08174-235633ಕ್ಕೆ ಸಂಪರ್ಕಿಸುವುದು.

Tuesday, February 20, 2018

PRESS NOTE 20-02-2018
                                 ಪತ್ರಿಕಾ ಪ್ರಕಟಣೆ                                  ದಿನಾಂಕ:20-02-2018

ಲಾರಿ ಡಿಕ್ಕಿ, ಪಾದಚಾರಿ ಸಾವು.

            ದಿನಾಂಕ: 20-02-2018 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಹಾಸನದ ಹಾಸನಾಂಬ ವೃತ್ತ, ವಲ್ಲಬಾಯಿ ರಸ್ತೆ ವಾಸಿ ಶ್ರೀ ಮಂಜುನಾಥ್, ರವರು ಹಾಸನ-ಬೇಲೂರು ರಸ್ತೆ, ವಿಜಯನಗರ ಬಡಾವಣೆ ಬಸ್ ನಿಲ್ದಾಣದ ಹತ್ತಿರ ಹಂಮ್ಸ್ ರಸ್ತೆಯ ಎಡಭಾಗದಿಂದ ರಸ್ತೆಯ ಭಾಗಕ್ಕೆ ರಸ್ತೆಯನ್ನು ದಾಟುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-16 ಬಿ-6036ರ ಟ್ಯಾಂಕರ್ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕೆಎ-27-ಬಿ- 9320 ರ ಅಶೋಕ ಲೈಲ್ಯಾಂಡ್ ಲಾರಿಗೆ ಡಿಕ್ಕಿ ಮಾಡಿ ರಸ್ತೆ ದಾಟುತ್ತಿದ್ದ ಶ್ರೀ ಮಂಜುನಾಥ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹೆಚ್.ಆರ್. ಮಂಜುನಾಥ ಬಿನ್ ರಂಗಸ್ವಾಮಿ, 38 ವರ್ಷ, ವಲ್ಲಬಾಯಿ ರಸ್ತೆ, ಹಾಸನ ರವರಿಗೆ ತೀವ್ರ ಸ್ವರೂಪ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಹೆಚ್. ಆರ್. ಪ್ರಸನ್ನ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


PRESS NOTE 19-02-2018
                             ಪತ್ರಿಕಾ ಪ್ರಕಟಣೆ                        ದಿನಾಂಕ: 19-02-2018.
ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು.
        ದಿನಾಂಕ: 17-02-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಂಕರನಹಳ್ಳಿ ಗ್ರಾಮದ  ಧರಣೇಶ ರವರ ಬಾಬ್ತು ಕೆಎ-13-ಇಎಫ್-0451 ರ ಯಮಹಾ ಬೈಕಿನಲ್ಲಿ ಸಂಬಂಧಿಕರ ಮದುವೆಗೆ ಹೋಗಿ ಮದುವೆ  ಕಾರ್ಯ ಮುಗಿಸಿಕೊಂಡು ವಾಪಸ್ ಊರಿಗೆ ಹೋಗಲು  ಹಾಸನ ತಾಲ್ಲೂಕು, ಹನುಮಂತಪುರದ ಕಡೆಗೆ ಹೋಗುವ ಜೋಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು  ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ಧರಣೇಶ, ಎಸ್.ಜಿ.  ಬಿನ್ ಗೋಪಾಲೇಗೌಡ, 29 ವರ್ಷ ರವರು ಮೃತಪಟ್ಟಿರುತ್ತಾರೆಂದು ಪ್ರತ್ಯಕ್ಷದರ್ಶಿ ಶ್ರೀ ರಂಗಸ್ವಾಮಿ ರವರು ಕೊಟ್ಟ ದೂರಿನ ಮೇರೆಗೆ  ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಕೆಎಸ್ಆರ್ ಟಿಸಿ ಬಸ್ ಬೈಕಿಗೆ ಡಿಕ್ಕಿ  ಬೈಕ್ ಸವಾರನ ಸಾವು
     ದಿನಾಂಕ: 19-02-2018 ರಂದು  ಬೆಳಗಿನ ಜಾವ 05-00 ಗಂಟೆ ಸಮಯದಲ್ಲಿ  ಆಲೂರು ತಾಲ್ಲೂಕು, ಮಂಜಲಗೂಡು ಗ್ರಾಮದ ನಿಂಗರಾಜು  ರವರ ಬಾಬ್ತು ಕೆಎ-46-ಇ-0319 ರ ಬೈಕಿನಲ್ಲಿ ಆಲೂರು ತಾಲ್ಲೂಕು, ಹೆದ್ದುರ್ಗ ಎನ್ಹೆಚ್-75 ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಹೈವೆ ನರ್ಸರಿಯ ನೇರದ ರಸ್ತೆಯ ಎಡಭಾಗದಲ್ಲಿ  ಸಕಲೇಶಪುರ ಕಡೆಯಿಂದ ಬರುತ್ತಿದ್ದಾಗ ಸಕಲೇಶಪುರ ಕಡೆಯಿಂದ ಬಂದ ಕೆಎ-18-ಎಫ್-624 ರ ಕೆಎಸ್ಆರ್  ಟಿಸಿ  ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ಬಸ್ಸಿನ ಮುಂಭಾಗದ ಬಂಪರ್  ಅಡಿಗೆ ಸಿಲುಕಿಕೊಂಡು ನಿಂಗರಾಜು ಬಿನ್ ಚೌಡೇಗೌಡ, 43 ವರ್ಷ ರವರು ಮೃತಪಟ್ಟಿರುತ್ತಾರೆಂದು  ಮೃತರ ಪತ್ನಿ ಶ್ರೀಮತಿ ಮಂಜುಳ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 

PRESS NOTE 18-02-2018


                                                                                                  ಪತ್ರಿಕಾ ಪ್ರಕಟಣೆ                                ದಿನಾಂಕ: 18-02-2018.

ಕೆಎಸ್ಆರ್ಟಿಸಿ ಬಸ್ ಬೈಕಿಗೆ ಡಿಕ್ಕಿ ಬೈಕ್ ಸವಾರ ಸಾವು
     ದಿನಾಂಕ: 17-02-2018 ರಂದು ರಾತ್ರಿ 07-20 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಅಡಗೂರು ಗ್ರಾಮದ  ಕೃಷ್ಣೇಗೌಡ ರವರ ಬಾಬ್ತು  ಕೆಎ-13-ಇಕೆ-8384 ರ ಟಿವಿಎಸ್ ಜುಪಿಟರ್ ಸ್ಕೂಟಿಯಲ್ಲಿ ಶ್ರವಣಬೆಳಗೊಳದಿಂದ ಚನ್ನರಾಯಪಟ್ಟಣಕ್ಕೆ ಹೋಗಲು ಚನ್ನರಾಯಪಟ್ಟಣ ಎನ್ ಹೆಚ್-75 ರಸ್ತೆ  ಗದ್ದೆಹಳ್ಳ  ಪೆಟ್ರೋಲ್ ಬಂಕ್ ಹತ್ತಿರ ಹೋಗುತ್ತಿದ್ದಾಗ  ಹಿಂದಿನಿಂದ ಅಂದರೆ ಬೆಂಗಳೂರು ಕಡೆಯಿಂದ ಬಂದ ಕೆಎ-23-ಎಫ್-1014 ರ ಕೆಎಸ್ಆರ್ ಟಿಸಿ ಬಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಕೃಷ್ಣೇಗೌಡ @ ಕೃಷ್ಣಪ್ಪ, 60 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಮಂಜೇಗೌಡ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಹೆಂಗಸು ಕಾಣೆ
       ದಿನಾಂಕ: 16-02-2018 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ ಹಾಸನ ಸಿದ್ದಯ್ಯನಗರ ವಾರ್ಡ್ ನಂ. 31 ರ ವಾಸಿ ಶ್ರೀ ವಿಶ್ವನಾಥ ಹೆಚ್.ಎಸ್.  ರವರ ಪತ್ನಿ ಶ್ರೀಮತಿ ದಿವ್ಯ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ದಿವ್ಯ ರವರ ಪತಿ ಶ್ರೀ ವಿಶ್ವನಾಥ ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ದಿವ್ಯ ಕೋಂ ವಿಶ್ವನಾಥ, 24 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಪೆನ್ ಷನ್ ಮೊಹಲ್ಲಾ ಠಾಣೆ ಫೋನ್ ನಂ. 08172-272260 ಕ್ಕೆ ಸಂಪರ್ಕಿಸುವುದು.


Saturday, February 17, 2018

PRESS NOTE 17022018
                 ಪತ್ರಿಕಾ ಪ್ರಕಟಣೆ          ದಿನಾಂಕ: 17-02-2018

ಆಟೋ ಪಲ್ಟಿ, ಆಟೋದಲ್ಲಿದ್ದ ಒಂದು ಮಹಿಳೆ ಸಾವು, ಇಬ್ಬರಿಗೆ ಗಾಯ
      ದಿನಾಂಕ: 16-02-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಅಗಸರಹಳ್ಳಿ ಗ್ರಾಮದ ವಾಸಿಗಳಾದ ಶ್ರೀಮತಿ ಲಕ್ಷ್ಮಮ್ಮ, ಶ್ರೀಮತಿ ದ್ಯಾವಮ್ಮ & ಶ್ರೀಮತಿ ಶಾರದಮ್ಮ ರವರುಗಳು ಟಮೋಟೋ ಕ್ಯೂಯಲು ಕೆಎ-17 ಬಿ-3970 ರ ಆಟೋದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಗೋವಿನಕೆರೆ ಗ್ರಾಮದ ವಾಸಿ ಶ್ರೀ ರಾಮಣ್ಣ, ರವರ ಜಮೀನಿನ ಹತ್ತಿರ ಹೋಗುತ್ತಿದ್ದಾಗ ಆಟೋ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆ ಎಡಬದಿ ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಶ್ರೀಮತಿ ಲಕ್ಷ್ಮಮ್ಮ, 60 ವರ್ಷ, ಅಗಸರಹಳ್ಳಿ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಗಾಯಗೊಂಡ ಶ್ರೀಮತಿ ಶ್ರೀ ದ್ಯಾವಮ್ಮ & ಶ್ರೀ ಶಾರದಮ್ಮ ರವರುಗಳು ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಮತಿ ಶಾರದಮ್ಮ, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
        ದಿನಾಂಕ: 11-02-2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ರಸ್ತೆ, ಗಾಣಿಗರ ಬೀದಿ ವಾಸಿ ಶ್ರೀ ರಾಜು, ರವರ ಮಗಳು ಕು|| ರೂಪ, ತರಕಾರಿ ಮಾಕರ್ೆಟ್ಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ರೂಪಳ ತಂದೆ ಶ್ರೀ ರಾಜು, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ರೂಪ ಬಿನ್ ರಾಜು, 16 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.

Friday, February 16, 2018

PRESS NOTE 16-02-2018                                  ಪತ್ರಿಕಾ ಪ್ರಕಟಣೆ                ದಿನಾಂಕ: 16-02-2018
ಟ್ರ್ಯಾಕ್ಟರ್ ನ ಅಯಾ ತಪ್ಪಿ, ಚಾಲಕ ಸಾವು
        ದಿನಾಂಕ: 15-02-2018 ರಂದು ಬೆಳಿಗ್ಗೆ 10-20 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಜಕನಹಳ್ಳಿ ಗ್ರಾಮದ ವಾಸಿ ಶ್ರೀ ಪಿಲೀಫ್, ರವರು ಅದೇ ಗ್ರಾಮದ ಶ್ರೀ ವಿಶ್ವನಾಥ, ರವರ ತೋಟದ ರೈಟರ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದು, ಶ್ರೀ ಪಿಲೀಫ್, ರವರು ಕೆಎ-18 443 ರ ಟ್ರ್ಯಾಕ್ಟರ್ ಮತ್ತು ಕೆಎ-18 445 ರ ಟ್ರೇಲರ್ ನ್ನು ತೆಗೆದುಕೊಂಡು ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಶಿರಗೂರು ಗ್ರಾಮದ ಜಕನಹಳ್ಳಿ ಗ್ರಾಮದ ಎಸ್ಟೇಟ್ ನ ಇಳಿಜಾರು ರಸ್ತೆಯಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಆಯಾತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ಶ್ರೀ ಪಿಲೀಫ್, 63 ವರ್ಷ, ಜಕನಹಳ್ಳಿ ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ತೋಟದ ಮಾಲೀಕರಾದ ಶ್ರೀ ವಿಶ್ವನಾಥ್, ರವರು ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಮಹಿಳೆ ಸಾವು
        ದಿನಾಂಕ: 15-02-2018 ರಂದು ಬೆಳಿಗ್ಗೆ 5-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಕಟ್ಟಾಯ ಗ್ರಾಮದ ವಾಸಿ ಶ್ರೀಮತಿ ತಂಗ್ಯಮ್ಮ, ರವರು ಕಟ್ಟಾಯ ಗ್ರಾಮದ ಶೆಟ್ಟಿಹಳ್ಳಿ ರಸ್ತೆ ಕ್ರಾಸ್ ನಿಂದ ಹಾಸನ-ಅರಕಲಗೂಡು ಕಡೆಗೆ ಹೋಗುವ ರಸ್ತೆ ದಾಟುತ್ತಿದ್ದಾಗ ಯಾವುದೋ ವಾಹನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ತಂಗ್ಯಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀಮತಿ ತಂಗ್ಯಮ್ಮ ಕೋಂ ಮೂಗಸ್ವಾಮಿಗೌಡ, 55 ವರ್ಷ, ಕಟ್ಟಾಯ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಶೇಖರ್, ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು
        ದಿನಾಂಕ: 15-02-2018 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅಂಗಡಿಹಳ್ಳಿ ಗ್ರಾಮದ ವಾಸಿ ಶ್ರೀ ಸೊಂಡಿ ರವರು ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹಾಸನ-ಬೇಲೂರು ರಸ್ತೆ, ಹತ್ತಿರ ಮಲ್ಲಿಕಾರ್ಜುನಪುರದ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಸೊಂಡಿ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸೊಂಡಿ ಬಿನ್ ಚಮ್ಮೆ, 70 ವರ್ಷ, ಅಂಗಡಿಹಳ್ಳಿ ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸೊಸೆ ಶ್ರೀಮತಿ ಇಲೋದ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.