ಪತ್ರಿಕಾ ಪ್ರಕಟಣೆ ದಿನಾಂಕ: 10-09-2017
ಹಾಸನ ನಗರದಲ್ಲಿ ಮಟ್ಕಾ ಜೂಜಾಡುತ್ತಿದ್ದ 4 ಜನರ ಬಂಧನ, ಬಂಧಿತರಿಂದ 3,020/- ನಗದು ವಶ
ಪ್ರಕರಣ: 01, ದಿನಾಂಕ:
09-09-2017 ರಂದು ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ಹಾಸನ ನಗರದ ಮಿಜರ್ಾಮೊಹಲ್ಲಾದ ವಲ್ಲಭಾಯಿ
ರಸ್ತೆಯಲ್ಲಿರುವ ಟೀ ಸ್ಟಾಲ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಮತ್ತು ಹಳೆ ಬಸ್ ನಿಲ್ದಾಣ ಕಾರ್
ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಡುತ್ತಿದ್ದಾರೆಂದು ಪಿಐ ಶ್ರೀ ದೊಡ್ಡೇಗೌಡ, ಡಿಸಿಐಬಿ ಘಟಕ ಹಾಸನ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ
ಸ್ಥಳಕ್ಕೆ ಹೋಗಿ ಮೋಸದಿಂದ ಸಾರ್ವಜನಿಕರಿಗೆ 1 ರೂಗೆ 80 ರೂ ಕೊಡುವುದಾಗಿ ಹೇಳಿಕೊಂಡು
ಸಾರ್ವಜನಿಕರಿಂದ ಹಣ ಪಡೆಯುತ್ತಾ ಮಟ್ಕಾ ಜೂಜಾಟ ನಡೆಸುತ್ತಿದ್ದವರ ಹಿಡಿದು ಹೆಸರು ವಿಳಾಸ
ಕೇಳಲಾಗಿ 1) ಅಬ್ದುಲ್ ಮಜೀದ್ ಬಿನ್ ಮಹಮದ್ ಹಯಾತ್, 52 ವರ್ಷ, ಮಿಜರ್ಾಮೊಹಲ್ಲಾ, ಹಾಸನ 2) ಸುರೇಶ ಬಿನ್ ಲೇಟ್ ರಾಜೇಗೌಡ, 38 ವರ್ಷ, ಚಿಕ್ಕಬೂವನಹಳ್ಳಿ ಗ್ರಾಮ ಹಾಸನ ತಾಲ್ಲೂಕು ಎಂದು
ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ ಜೂಜಾಟದಿಂದ ಗಳಿಸಿದ್ದ 2450/- ನಗದನ್ನು
ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ.
ಪ್ರಕರಣ: 02, ದಿನಾಂಕ: 09-09-2017 ರಂದು ಸಂಜೆ 06-00 ಗಂಟೆ
ಸಮಯದಲ್ಲಿ ಹಾಸನ ನಗರ, ಮಿಜರ್ಾಮೊಹಲ್ಲಾ, ಪಾಪಣ್ಣ ಶಾ ಮಿಲ್
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ
ಆರೋಕಿಯಪ್ಪ, ಪೆನ್ಷನ್ ಮೊಹಲ್ಲಾ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ
ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಹಿಡಿದು ಹೆಸರು ವಿಳಾಸ ಕೇಳಲಾಗಿ 1)
ಆಸ್ಕರ್ ಷರೀಪ್ ಬಿನ್ ಲೇಟ್ ಗೌಸ್ ಷರೀಪ್, 25 ವರ್ಷ, ಮಿಜರ್ಾಮೊಹಲ್ಲಾ
ಹಾಸನ 2) ಲತೀಫ್ ಅಹಮದ್ ಬಿನ್ ರಫೀಕ್ ಅಹಮದ್, 34 ವರ್ಷ, ಮಿಜರ್ಾಮೊಹಲ್ಲಾ
ಹಾಸನ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು, ಜೂಜಾಟದಲ್ಲಿ
ಪಣಕ್ಕಿಟ್ಟಿದ್ದ 570/- ನಗದನ್ನು
ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ
ಕೈಗೊಂಡಿರುತ್ತದೆ.
No comments:
Post a Comment