* * * * * * HASSAN DISTRICT POLICE

Friday, March 10, 2017

ಪತ್ರಿಕಾ ಪಕಟಣೆಃ ಹೊಳೆನರಸೀಪುರ ವೃತ್ತ ಪೊಲೀಸರ ಕಾರ್ಯಾಚರಣೆ : ಜೋಡಿ ಕೊಲೆಗಾರರ ಬಂಧನ

ಪತ್ರಿಕಾ ಪಕಟಣೆಃ
ಹೊಳೆನರಸೀಪುರ ವೃತ್ತ ಪೊಲೀಸರ ಕಾರ್ಯಾಚರಣೆ : ಜೋಡಿ ಕೊಲೆಗಾರರ ಬಂಧನ
1)          ಕೊಲೆಗೀಡಾದವರ ಹೆಸರು ವಿಳಾಸಃ

 1).ದಿಲೀಪ್ ಬಿನ್ ರಾಜೇಗೌಡ,29 ವರ್ಷ, ವಕ್ಕಲಿಗರು, ವ್ಯಪಾರ, ಹಾಲಿವಾಸ ತ್ರೀಲೋಕ್ ಲಾಡ್ಜ್ ,ನಂ,18 ,ಬಿ, ಗಾಂಧಿನಗರ, ಖಾಯಂ, ವಿಳಾಸ, ರಾಚೇನಹಳ್ಳಿ ಗ್ರಾಮ,ಶ್ರವಣಬೆಳಗೂಳ ಹೋಬಳಿ, ಚನ್ನರಾಯಪಟ್ಟಣ, ತಾ|| ಹಾಸನ ಜಿಲ್ಲೆ,

2).ರಾಜಶೇಖರಪ್ಪ, @ ಸುಧೀಪ ಬಿನ್ ಬಸವರಾಜಪ್ಪ, 32 ವರ್ಷ, ಲಿಂಗಾಯಿತರು, ಟ್ಯಾಕ್ಸಿ ಚಾಲಕ, ಹಾಲಿ ವಾಸ,ಪೈಪ್ ಲೈನ್ ರಸ್ತೆ,ಟಿ.ದಾಸರಹಳ್ಳಿ ಬೆಂಗಳೂರು ಖಾಯಂ ವಿಳಾಸ, ಆರ್,ಜಿ ಕೊಪ್ಪಲು,ಕಸಭಾ ಹೋಬಳಿ, ಕಡೂರು ತಾ|| ಚಿಕ್ಕಮಗಳೂರು ಜಿಲ್ಲೆ
2) ಕೊಲೆಗೀಡಾದವರ ಹಿನ್ನೆಲೆ
1) ಕೊಲೆಗೀಡಾದ ದಿಲೀಪ ಚನ್ನರಾಯಪಟ್ಟಣ ತಾಲ್ಲೂಕು, ರಾಚೇನಹಳ್ಳಿ ಮೂಲದವನಾಗಿದ್ದು ಈತ ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಯಾಗಿದ್ದು, ಈತ 2014 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಪ್ರದೀಪ @ ಕಜ್ಜಿ ಈತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ ಅದಲ್ಲದೆ ಈತ ಬೆಂಗಳೂರು ನಗರದ ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ, ಉಪ್ಪಾರಪೇಟೆ, ಪೊಲೀಸ್ ಠಾಣಾ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಇತರೆ 4 ಸುಲಿಗೆ, ಕಳ್ಳತನ ಪ್ರಕರಣಗಳು ಈತನ ಮೇಲೆ ದಾಖಲಾಗಿರುತ್ತವೆ, ಈತ ಈ ಹಿಂದೆ ರೌಡಿ ಆಸಾಮಿ ಚೇತುವಿನ ಆತ್ಮೀಯನಾಗಿದ್ದು ಕೊಲೆಯಾಗುವ ಪೂರ್ವದಲ್ಲಿ ಹಾಸನ ಮೂಲದ ರೌಡಿ ಆಸಾಮಿ ಚೈಲ್ಡ್ ರವಿಯ ನಿಕಟವರ್ತಿಯಾಗಿದ್ದನು  
2) ಕೊಲೆಗೀಡಾದ ರಾಜಶೇಖರ @ ಸುದೀಪ ಈತ ಕಡೂರು ತಾಲ್ಲೂಕು ಆರ್ ಜಿ ಕೊಪ್ಪಲು ಮೂಲದವನಾಗಿದ್ದು ಈತನ ಮೇಲೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ಹಾಗೂ ಬೆಂಗಳೂರು ನಗರದಲ್ಲಿ 4 ಸುಲಿಗೆ ಹಾಗೂ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ಈತ ಹಾಸನ ಮೂಲದ ರೌಡಿ ಆಸಾಮಿ ಚೈಲ್ಡ್ ರವಿಯ ನಿಕಟವರ್ತಿಯಾಗಿರುತ್ತಾನೆ.
3) ಆರೋಪಿತರ ಹೆಸರು ವಿಳಾಸ
1) ಚೇತು @ ಚೇತನ ಬಿನ್ ಮಲ್ಲಯ್ಯ, 29ವರ್ಷ, ವಕ್ಕಲಿಗರು, ಯಾಚೇನಹಳ್ಳಿ ಗ್ರಾಮಕಸಬಾ ಹೋಬಳಿ,ಚನ್ನರಾಯಪಟ್ಟಣ  ತಾಲ್ಲೂಕು. ಹಾಸನ ಜಿಲ್ಲೆ
2) ಕಾಳಿ  @ ಪ್ರಸನ್ನ  ಬಿನ್ ನಂಜೇಗೌಡ, 32ವರ್ಷ, ವಕ್ಕಲಿಗರು, ಗೂರನಹಳ್ಳಿ  ಚನ್ನರಾಯಪಟ್ಟಣ   ಟೌನ್
3) ಕೇಶವ  ಬಿನ್  ಮಂಜೇಗೌಡ 32ವರ್ಷ, ವಕ್ಕಲಿಗರು, ಮೈನ್ಸ್ ಬೈರಾಪುರ ಗ್ರಾಮ, ಚನ್ನರಾಯಪಟ್ಟಣ  ತಾಲ್ಲೂಕು  ಹಾಲಿ ವಾಸ ಗೂರನಹಳ್ಳಿ  ಚನ್ನರಾಯಪಟ್ಟಣ   ಟೌನ್
4), ರಖಿತ @ ಗುಂಡ  @ಬೊಮ್ಮ ಬಿನ್ ಪುಟ್ಟೇಗೌಡ, 27 ವರ್ಷ, ಕಂಚನಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು   
   5) ಪ್ರಶಾಂತ @ ಗುಂಡ ಬಿನ್ ದೇವರಾಜೇಗೌಡ 24 ವರ್ಷ, ವಾಸ ಗೌಡಗೆರೆ ಗ್ರಾಮ, ಕಸಬಾ ಹೋ|| ಚ ರಾ ಪಟ್ಟಣ ತಾ||
   6) ಮಂಜುನಾಥ @ ಗುಂಡ ಬಿನ್ ಬಾಲಕೃಷ್ಣ 28 ವರ್ಷ, ವಾಸ ಯಾಚೇನಹಳ್ಳಿ ಗ್ರಾಮ, ಕಸಬಾ ಹೋ|| ಚ ರಾ ಪಟ್ಟಣ ತಾ||,
7) ವಿಜಯಕುಮಾರ @ ವಿಜಿ ಬಿನ್ ಕೃಷ್ಣೇಗೌಡ 26 ವರ್ಷ, ಯಾಚೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ  ತಾಲ್ಲೂಕು  

4) ಆರೋಪಿತರ ಹಿನ್ನೆಲೆ
ಆರೋಪಿತರಾದ ಚೇತು, ಕಾಳಿ, ಕೇಶವ, ರವರುಗಳು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಹಾಗೂ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳಾಗಿದ್ದು ಸದರಿ ಆರೋಪಿತರು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2007 ರಿಂದ ಕೊಲೆ, ಕೊಲೆಯತ್ನ, ಸುಲಿಗೆ,ದರೋಡೆ, ಹಲ್ಲೆ, ಹೀಗೆ ಸುಮಾರು 15 ಕ್ಕಿಂತ ಹೆಚ್ಚು ಪ್ರಕರಣಗಳು ಈತನ ಮೇಲಿರುತ್ತದೆ,
Ø   2012 ರಲ್ಲಿ ಚನ್ನರಾಯಪಟ್ಟಣ ಬರಗೂರು ವಿಜಿ ಸಹಚರರಾದ  ಪರಮೇಶ ಮತ್ತು ಚೇತು ಎಂಬುವವರ  ಜೋಡಿ ಕೊಲೆಯನ್ನು ರೌಡಿ ಆಸಾಮಿಗಳಾದ ಚೇತು, ಕೇಶವ, ಹಾಗೂ ಇತರರು   ಜೋಡಿ ಕೊಲೆ ಮಾಡಿರುತ್ತಾರೆ.     
Ø   2012 ರಲ್ಲಿ ಹೊಳೆನರಸೀಪುರದ ಪೊಲೀಸ್ ಕಾನ್ಸ ಟೇಬಲ್ ಹರೀಶ ರವರ ಮೇಲೆ ತೀವ್ರ ಹಲ್ಲೆಮಾಡಿ ಕೊಲೆಯತ್ನ ವನ್ನು ರೌಡಿ ಆಸಾಮಿಗಳಾದ ಚೇತು, ಕಾಳಿ, ಕೇಶವ, ಹಾಗೂ ಇತರರು   ಮಾಡಿರುತ್ತಾರೆ

5) ಪ್ರಕರಣದ  ಹಿನ್ನೆಲೆ
             ರೌಡಿ ಆಸಾಮಿಗಳಾದ ಚೇತು, ಕಾಳಿ, ಕೇಶವ, ಹಾಗೂ ಇತರರು    ಚನ್ನರಾಯಪಟ್ಟಣದ ಬರಗೂರು ವಿಜಿ ಕಡುವೈರಿಗಳಾಗಿದ್ದು ಸದರಿ ಬರಗೂರು ವಿಜಿಗೆ ಹಾಸನದ ರೌಡಿ ಆಸಾಮಿ ಚೈಲ್ಡ್ ರವಿ ಬೆಂಬಲನೀಡುತ್ತಿದ್ದಾನೆ ಎಂಬುವ ಕಾರಣಕ್ಕೆ ಚೈಲ್ಡ್ ರವಿಯನ್ನು ಕೊಲೆ ಮಾಡಲು ತೀರ್ಮಾನಿಸಿ ದಿನಾಂಕ 17-12-2016 ರಂದು ಚೈಲ್ಡ್ ರವಿಯ ಆಪ್ತ ರಾದ ದಿಲೀಪ ಮತ್ತು ಸುದೀಪ (ಕೊಲೆಗೀಡಾದರು) ಬೆಂಗಳೂರಿನಲ್ಲಿ ಕೆಎ-13-ಬಿ-4659 ಇಂಡಿಕಾ ಕಾರಿನಲ್ಲಿ ಅಪಹರಿಸಿ ಮಾಗಡಿ ತಾಲ್ಲೂಕು ಪಾಲನಹಳ್ಳಿಯಲ್ಲಿ ತೋಟದ ಮನೆಯಲ್ಲಿ ಕೂಡಿಹಾಕಿ ಹಲ್ಲೆ ಮಾಡಿ ಸದರಿ ದಿಲೀಪ ಮತ್ತು ಸುದೀಪ ಮೂಲಕ ಚೈಲ್ಡ್ ರವಿಗೆ ಪೋನ್ ಮಾಡಿಸಿ ಉಪಾಯವಾಗಿ ಚೈಲ್ಡ್ ರವಿಯನ್ನು ಕರೆಸಿಕೊಳ್ಳಲು ಪ್ರಯತ್ನಿಸಿರುತ್ತಾರೆ ಆದರೆ  ದಿಲೀಪ ಮತ್ತು ಸುದೀಪ ಸಹಕಾರ ನೀಡಿರುವುದಿಲ್ಲ ಆಗ ಹಲ್ಲೆಮಾಡಿ ಸದರಿ ಕಾರಿನಲ್ಲಿ ದಿಲೀಪ ಮತ್ತು ಸುದೀಪ ರವರನ್ನು ಹಾಕಿಕೊಂಡು ಹೊಳೆನರಸೀಪುರ ತಾಲ್ಲೂಕು ಹರದನಹಳ್ಳಿ ಸಿಗರನಹಳ್ಳಿಗ್ರಾಮಗಳ ಬೆಟ್ಟದ ತಪ್ಪಲಿನಲ್ಲಿ ಹಾದುಹೋಗಿರುವ ಚಾನಲ್ ಹತ್ತಿರ ಕರೆತಂದು ಪುನಃ ರೌಡಿ ಆಸಾಮಿಗಳಾದ ಚೇತು, ಕಾಳಿ, ಕೇಶವ, ಹಾಗೂ ಇತರರು   ಹಲ್ಲೆಮಾಡಿ ಕೊಲೆ ಮಾಡಿ ಸದರಿಯವರನ್ನು ಪಕ್ಕದಲ್ಲಿ ಹಾದುಹೋಗಿರುವ ಚಾನಲ್ ಗೆ ಎಸೆದು ಹೋಗಿ ಆರೋಪಿತರು ಮುಂಬೈ,ಉತ್ತರ ಪ್ರದೇಶದ ಕಡೆ ತಲೆ ಮರೆಸಿಕೊಂಡು ದಿನಾಂಕ 28-02-17 ರಂದು ಆರೋಪಿತರಾದ ಚೇತು, ಕಾಳಿ, ಕೇಶವ, ರವರು ನ್ಯಾಯಾಯಲಕ್ಕೆಹಾಜರಾಗಿದ್ದು ಸದರಿ ಆರೋಪಿತರನ್ನು ದಿನಾಂಕ 3-3-2017ರಂದು ಪೊಲೀಸ್ ವಶಕ್ಕೆ ಪಡೆದು ಸದರಿಯವರ ಹೇಳಿಕೆ ಮೇರೆಗೆ ಉಳಿದ ಆರೋಪಿತರಾದ ರಖಿತ, ಪ್ರಶಾಂತ, ಮಂಜುನಾಥ, ವಿಜಿಕುಮಾರರವರನ್ನು ದಿನಾಂಕ 06-03- 2016ರಂದು  ದಸ್ತಗಿರಿ ಮಾಡಿದ್ದು ಸದರಿ ಆರೋಪಿತರ ಮಾಹಿತಿ ಮೇರೆಗೆ ಆರೋಪಿತರು ಕೃತ್ಯಕ್ಕೆಉಪಯೋಗಿಸಿದ್ದ ಕೆಎ-13-ಬಿ-4659 ಇಂಡಿಕಾ ಕಾರು ಕಬ್ಬಿಣದ ರಾಡು ಬೀರು ಬಾಟಲ್ ಗಳನ್ನು ವಶಪಡಿಸಕೊಳ್ಳಲಾಗಿರುತ್ತೆ.

No comments: