* * * * * * HASSAN DISTRICT POLICE

Friday, May 25, 2018

PRESS NOTE : 24-05-2018


ಪತ್ರಿಕಾ ಪ್ರಕಟಣೆ                          ದಿನಾಂಕ: 24-05-2018.

ಆಟೋ ಪಲ್ಟಿ, ಪ್ರಯಾಣಿಕ ಸಾವು : ದಿನಾಂಕ: 22-05-2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಅಗಿಲೆ ಗ್ರಾಮದ ವಾಸಿ ಶ್ರೀ ಕರಿಗೌಡ@ ಓಡೇಗೌಡ, ರವರು ಹಾಸನದಿಂದ ಅಗಿಲೆ ಗ್ರಾಮಕ್ಕೆ ಹೋಗಲು ಕೆಎ-13,ಬಿ-9433 ರ ಆಟೋದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಹಾಸನ-ಅರಕಲಗೂಡು ರಸ್ತೆ, ಫಾರಂ ಹೌಸ್, ಕಬ್ಬಿನಹಳ್ಳಿ ಬಾರೆ ಹತ್ತಿರ ಹೋಗುತ್ತಿದ್ದಾಗ ಆಟೋ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ ಆಟೋ ಪಲ್ಟಿಯಾಗಿ ಆಟೋದಲ್ಲಿದ್ದ ಶ್ರೀ ಕರಿಗೌಡ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಕರೀಗೌಡ ಬಿನ್ ಓಡೇಗೌಡ, 45 ವರ್ಷ, ಅಗಿಲೆ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು. ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಪಾರ್ವತಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ :  ದಿನಾಂಕ: 09-05-2018 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ  ಆಲೂರು ತಾಲ್ಲೂಕು, ಕಸಬಾ ಹೋಬಳಿ, ಕವಳಿಕೆರೆ ಗ್ರಾಮದ ವಾಸಿ ಶ್ರೀ ಕುಮಾರ ರವರ ಪತ್ನಿ ಶ್ರೀಮತಿ ಬೇಬಿ @ ಲೀಲಾ ರವರು ಬೇಬಿ @ ಲೀಲಾ ರವರು  ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಶ್ರೀಮತಿಬೇಬಿ @ ಲೀಲಾ  ರವರ ಪತಿ ಕುಮಾರ ರವರು ದಿನಾಂಕ: 23-05-18 ರಂದು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಬೇಬಿ @ ಲೀಲಾ ಕೊಂ ಕುಮಾರ, 25  ವರ್ಷ, ಗೃಹಿಣಿ, 5 ಅಡಿ ಎತ್ತರ, ಕನ್ನಡ ಭಾಷೆ, ಮಾತನಾಡುತ್ತಾರೆ.  ಈ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಆಲೂರು ಪೊಲೀಸ್ ಠಾಣೆ ಫೋನ್ ನಂ. 08170-218231 ಕ್ಕೆ ಸಂಪರ್ಕಿಸುವುದು.

No comments: