* * * * * * HASSAN DISTRICT POLICE

Monday, January 29, 2018

PRESS NOTE 29-01-2018

                                                       

   
                                          ಪತ್ರಿಕಾ ಪ್ರಕಟಣೆ                                 ದಿನಾಂಕ: 29-01-2018.

ಬೈಕ್ ಡಿಕ್ಕಿ, ಪಾದಚಾರಿ ಮಹಿಳೆ ಸಾವು:
     ದಿನಾಂಕ: 28-01-2018 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಸವಾಸಿಹಳ್ಳಿ ಪೋಸ್ಟ್, ಶಿವಪುರ ಕಾವಲು ಗ್ರಾಮದ  ವಾಸಿ ಶ್ರೀಮತಿ ಚಂದ್ರಮ್ಮ, ರವರು ಅಕ್ಕನ ಮಗನಾದ ಶ್ರೀ ಸಿದ್ದೇಶ್, ಮತ್ತು ಗುರುಮೂತರ್ಿ, ರವರೊಂದಿಗೆ ಕೂಲಿ ಕೆಲಸಕ್ಕೆ ಹೋಗಲು ಹಾಸನ ತಾಲ್ಲೂಕು, ಹಾಸನ-ಬೇಲೂರು ರಸ್ತೆ, ಹರಳಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-46 ಹೆಚ್-5296 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ಚಂದ್ರಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಲಾಗಿ ಶ್ರೀಮತಿ ಚಂದ್ರಮ್ಮ ಕೋಂ ಪಾಪ, 50 ವರ್ಷ, ಶಿವಪುರ ಕಾವಲು ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತರ ಅಕ್ಕನ ಮಗನಾದ ಶ್ರೀ ಸಿದ್ದೇಶ್, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಬೈಕ್ ಡಿಕ್ಕಿ ಪಾದಾಚಾರಿ ಸಾವು
      ದಿನಾಂಕ: 22-01-2018 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಸಂಕನಹಳ್ಳಿ ಗ್ರಾಮದ  ಮಂಜುನಾಥ ರವರು ಹೊಳೆನರಸೀಪುರ ಪಟ್ಟಣ ಚಿಟ್ಟನಹಳ್ಳಿ ಬಡಾವಣೆಯಲ್ಲಿ ಕೆಲಸ ಮುಗಿಸಿ ಚಿಟ್ಟನಹಳ್ಳಿ ಬಡಾವಣೆಯ ಹತ್ತಿರ ಅರಕಲಗೂಡು ರಸ್ತೆಯಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ಹೊಳೆನರಸೀಪುರ ಕಡೆಯಿಂದ ಬಂದ  ಕೆಎ-13-ಇಸಿ-4967 ರ ಬೈಕ್ ಚಾಲಕ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿ, ನಂತರ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ವಾಪಸ್ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ; 28-01-2018 ರಂದು ಮಂಜುನಾಥ ಬಿನ್ ಲೇಟ್ ಪುಪ್ಪಯ್ಯ, 40 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಮ್ಮ ಶ್ರೀ ಶೇಖರ್ ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಮನುಷ್ಯ ಕಾಣೆ
     ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಬಕ್ಕಪ್ಪನಕೊಪ್ಪಲು ಗ್ರಾಮದ ಮಂಜಯ್ಯ ರವರು ಕಟ್ಟಿನ ಶಾಸ್ತ್ರವನ್ನು ಹೇಳಲು ಅರಸಿಕೆರೆ ತಾಲ್ಲೂಕು, ಸಕಲೇಶಪುರ ತಾಲ್ಲೂಕು ಮತ್ತು ಮೂಡಿಗೆರೆ ಕಡೆಗಳಿಗೆ ಹೋಗುತ್ತಿದ್ದು, ಒಂದು ವಾರ ಅಥವಾ 10 ದಿನಗಳು ಕಳೆದ ನಂತರ ವಾಪಸ್ ಮನೆಗೆ ಬರುತ್ತಿದ್ದವರು ಈಗ್ಗೆ 02 ತಿಂಗಳ ಹಿಂದೆ ದಿನಾಂಕ: 28-11-2017 ರಂದು ಬೆಳಿಗ್ಗೆ 09-00 ಗಂಟೆಗೆ ಎಂದಿನಂತೆ ತಮ್ಮ ಕಾಯಕವನ್ನು ಮಾಡಲು ಮನೆಯಿಂದ ಹೋದವರು 15 ದಿನಗಳು ಕಳೆದರೂ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮಂಜಯ್ಯ ರವರ ಮಗ ಶ್ರೀ ಗಣೇಶ ರವರು ದಿನಾಂಕ: 28-01-2018 ರಂದು ಕೊಟ್ಟ ದೂರಿನ ಮೇರೆಗೆ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.  ಕಾಣೆಯಾದ ವ್ಯಕ್ತಿಯ ಚಹರೆ: ಮಂಜಯ್ಯ, 67 ವರ್ಷ, 5 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ  ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ  ಹಾಸನ ಜಾವಗಲ್ ಠಾಣೆ ಫೋನ್ ನಂ. 08174-271221 ಕ್ಕೆ ಸಂಪರ್ಕಿಸುವುದು.

ಗಂಡಸು ಕಾಣೆ


    ದಿನಾಂಕ: 25-01-2018 ರಂದು ಬೆಳಿಗ್ಗೆ 08-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಕೇರಳಾಪುರ ಸಂತೆಬೀದಿ ವಾಸಿ ದೇವರಾಜ ರವರು ಮನೆಯಿಂದ ರಾಮನಾಥಪುರಕ್ಕೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ದೇವರಾಜ ರವರ ಅಣ್ಣ ಶ್ರೀ ನಿಂಗರಾಜ ರವರು ದಿನಾಂಕ: 28-01-2018 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ದೇವರಾಜ ಬಿನ್ ಈರಪ್ಪ, 27 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೊಣನೂರು ಠಾಣೆ ಫೋನ್ ನಂ.  08175666227  ಕ್ಕೆ ಸಂಪರ್ಕಿಸುವುದು.

No comments: