* * * * * * HASSAN DISTRICT POLICE

Wednesday, December 6, 2017

PRESS NOTE : 05-12-2017

ಪತ್ರಿಕಾ ಪ್ರಕಟಣೆ               ದಿನಾಂಕ: 05-12-2017

ಮಟ್ಕಾ-ಜೂಜಾಡುತ್ತಿದ್ದವನ ಬಂಧನ, ಬಂಧತನಿಂದ ಸುಮಾರು 2260/- ನಗದು ವಶ:
ದಿನಾಂಕ: 04-12-2017 ರಂದು ಮಧ್ಯಾಹ್ನ 2-15 ಗಂಟೆ ಸಮಯದಲ್ಲಿ ಹಾಸನದ ನಗರ ಸಭೆ ಮುಂಭಾಗ ಗೂಡ್ಸ್ ಆಟೋ ಸ್ಟ್ಯಾಂಡಿನ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ-ಜೂಜಾಟಾಡುತ್ತಿದ್ದಾರೆಂದು ಶ್ರೀ ಡಿ. ಸತೀಶ್, ಪಿಐ, ಸಿಇಎನ್, ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಮುಜಾಮಿಲ್ ಬಿನ್ ಆರೂನ್, 34 ವರ್ಷ, ಮೆಕಾನಿಕ್ ಕೆಲಸ ಹಂದಿಗುಡ್ಲು ಶ್ರೀನಗರ, ಹಾಸನ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 2260/- ನಗದನ್ನು ಅಮಾನತ್ತುಪಡಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಒಬ್ಬನ ಸಾವು
ದಿನಾಂಕ: 04-12-2017 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕಗನ್ನಿ ಗ್ರಾಮದ ವಾಸಿ ಶ್ರೀ ಚಂದ್ರಶೇಖರ್, ರವರು ಟ್ರ್ಯಾಕ್ಟರ್ನ್ನು ತೆಗೆದುಕೊಂಡು ಜೊತೆ ಅದೇ ಗ್ರಾಮದ ಶ್ರೀ ಭರತ್, ರವರನ್ನು ಕರೆದುಕೊಂಡು ಹೊಳೆನರಸೀಪುರ ತಾಲ್ಲೂಕು, ವಳಂಬಿಗೆ ಗ್ರಾಮದ ಶ್ರೀ ಕೃಷ್ಣೇಗೌಡ, ರವರ ಬಾಬ್ತು ಜಮೀನಿನನ್ನು ಟ್ರ್ಯಾಕ್ಟರ್ನಲ್ಲಿ ಉಳಿಮೆ ಮಾಡುತ್ತಿದ್ದು, ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ಟ್ರ್ಯಾಕ್ಟರ್ ಹತ್ತಿಸುವಾಗ ನಿರ್ಲಕ್ಷ್ಯತೆಯಿಂದ ಓಡಿಸಿದ್ದ ಪರಿಣಾಮ  ಟ್ರ್ಯಾಕ್ಟರ್ ಮಗುಚಿ ಬಿದ್ದಿದ್ದು, ಜಮೀನಿನ ಹತ್ತಿರ ನಿಂತಿದ್ದ ಶ್ರೀ ಭರತ್ ಬಿನ್ ಕೃಷ್ಣೇಗೌಡ, 24 ವರ್ಷ, ಚಿಕ್ಕಗನ್ನಿ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರು ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಅದೇ ಗ್ರಾಮದ ವಾಸಿ ಶ್ರೀ ಮಹೇಂದ್ರ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಯಾಂಟರ್ ಲಾರಿ ಡಿಕ್ಕಿ, ಪಾದಚಾರಿ ಸಾವು
ದಿನಾಂಕ: 04-12-207 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಗಂಜಲಗೂಡು ಗ್ರಾಮದ ವಾಸಿ ಶ್ರೀ ಯೋಗೇಶ್, ಮತ್ತು ಅಣ್ಣ ಶ್ರೀ ರೇವಣ್ಣ ರೊಂದಿಗೆ ಬೈಕ್ನಲ್ಲಿ ಹಾಸನಕ್ಕೆ ಕೂಲಿಕೆಲಸಕ್ಕೆ ಬಂದಿದ್ದು, ಜೋಳತುಂಬವ ಕೆಲಸಕ್ಕೆ ಹೋಗುತ್ತೇನೆಂದು ಅಣ್ಣ ಶ್ರೀ ರೇವಣ್ಣ, ರವರಿಗೆ ಹೇಳಿ ಹಾಸನ ಸಂತೇಪೇಟೆಯ ಬಳಿ ಅರಕಲಗೂಡು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಕೆಎ-52-8860 ರ ಕ್ಯಾಂಟರ್ ಲಾರಿ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಯೋಗೇಶ್, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಯೋಗೇಶ್ ಬಿನ್ ಅಣ್ಣಾಜಿಗೌಡ, 31 ವರ್ಷ, ಗಂಜಲಗೂಡು ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ರವರು ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಅಣ್ಣ ಶ್ರೀ ರೇವಣ್ಣ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕೆಎಸ್ಆರ್ಟಿಸಿ  ಮತ್ತು ಖಾಸಗಿ ಬಸ್ಸಗಳ ಮುಖಾಮುಖಿ-ಡಿಕ್ಕಿ, ಮೂವರ ಸಾವು
ದಿನಾಂಕ: 05-12-2017 ರಂದು ಬೆಳಗಿನ ಜಾವ 2-45 ಗಂಟೆ ಸಮಯದಲ್ಲಿ  ಕೆಎ-19-ಎಫ್-2980 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕನಾದ ಶ್ರೀ ದಿನಕರ, ರವರು ಉಡುಪಿ-ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಹೋಗಲು  ಆಲೂರು ತಾಲ್ಲೂಕು, ಹೆದ್ದುರ್ಗ ಕ್ರಾಸ್, ಬಿಳಿ ಎನ್ಹೆಚ್-75, ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-51 ಡಿ-7177 ರ ಖಾಸಗಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಎರಡು ಬಸ್ಸುಗಳು ಜಖಂಗೊಂಡ ಪರಿಣಾಮ ಕೆಎ-51 ಡಿ-7177 ರ ಖಾಸಗಿ ಬಸ್ ಮತ್ತು ಕೆಎ-19 ಎಫ್-2980 ರ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮತಿ ಯಶೋಧ ಮತ್ತು ಶ್ರೀಮತಿ ಫಾತೀಮಾ, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಲೂರು ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ  1) ಶ್ರೀಮತಿ ಫಾತೀಮಾ ಸುನ್ನೀರಾ ಬಿನ್ ಅಬ್ದುಲ್ ಸಲಾಂ, 27 ವರ್ಷ, ಪಾಲನಂ ಚಂಗಲಂ ಗ್ರಾಮ, ಕಾಸರಗೋಡು ತಾಲ್ಲೂಕು, ಕಾಸಡಗೋಡು ಜಿಲ್ಲೆ, ಕೇರಳ ರಾಜ್ಯ ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ. 2) ಶ್ರೀಮತಿ ಯಶೋಧ ಕೋಂ ಶ್ರೀಧರ್ಭಟ್ಟ, 42 ವರ್ಷ, ಆದಿ ಉಡುಪಿ ಗ್ರಾಮ, ಉಡುಪಿ ತಾಲ್ಲೂಕು ರವರು ಹಾಸನದ ಮಂಗಳಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. 3) ಕಾತರ್ಿಕ್ ರೆಡ್ಡಿ ಬಿನ್ ಚಿನ್ನಪ್ಪ ರೆಡ್ಡಿ, 30 ವರ್ಷ, ಮುಗೇಶಿ ಪಾಳ್ಯ, ಬೆಂಗಳೂರು ರವರು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆಂದು ಶ್ರೀ ದಿನಕರ, ಕೆಎಸಆರ್ಟಿಸಿ ಚಾಲಕ ಉಡುಪಿ ಡಿಪೋ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಯಾವುದೋ ವಾಹನ ಬೈಕಿಗೆ ಡಿಕ್ಕಿ ಬೈಕಿನಲ್ಲಿದ್ದ ಒಬ್ಬರ ಸಾವು, ಇನ್ನೊಬ್ಬರಿಗೆ ಗಾಯ
    ದಿನಾಂಕ: 04-12-2017 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಗ್ಯಮ್ಮನ ಬಡಾವಣೆ ವಾಸಿ ಗುರುದತ್ತ ರವರ ಬಾಬ್ತು ಕೆಎ-01-ಎಫ್-8861 ರ ಹಿರೋಹೊಂಡಾ ಸ್ಲೆಂಡರ್ ಬೈಕಿನಲ್ಲಿ ಸ್ನೇಹಿತ ಮಣಿ ರವರೊಂದಿಗೆ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಜೋಡಿಗಟ್ಟೆ ಗ್ರಾಮದ ಎನ್ಹೆಚ್-75 ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಗುರುದತ್ತ, 30 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಾಯಗೊಂಡ ಮಣಿ ರವರನ್ನು ಚಿಕಿತ್ಸೆಗಾಗಿ ಸಕರ್ಾರಿ ಆಸ್ಪತ್ರೆಗೆ ಸೇರಿಸಲಾಗಿರುತ್ತದೆಂದು ಪ್ರತ್ಯಕ್ಷದಶರ್ಿ ಶ್ರೀ ಶಮಂತಕುಮಾರ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕ್ರಮ ಕೈಗೊಂಡಿರುತ್ತದೆ.

ಹುಡುಗಿ ಕಾಣೆ

     ದಿನಾಂಕ: 29-11-2017 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ, ಗೂರನಹಳ್ಳಿ ಬಡಾವಣೆ, ಬಾಗೂರು ರಸ್ತೆ, ರಾಮಚಂದ್ರ ರವರ ಮಗಳು  ರಂಜಿತ ಟೌನ್ಗೆ ಹೋಗಿ ಬರುವುದಾಗಿ  ಮನೆಯಿಂದ ಹೋದವಳು ವಾಪಸ್ ಮನೆಗೆ ಬರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರಂಜಿತಳ ತಂದೆ ಶ್ರೀ ರಾಮಚಂದ್ರ ರವರು ದಿನಾಂಕ: 04-12-2017 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ರಂಜಿತ ಬಿನ್ ರಾಮಚಂದ್ರ, 21 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ. ಕೋಲುಮುಖ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟಾಪ್, ಸಿಲ್ವರ್ ಕಲರ್ ಪ್ಯಾಂಟ್ ಧರಿಸಿರುತ್ತಾಳೆ. ಕಾಣೆಯಾದ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಫೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು. 

No comments: