ಪತ್ರಿಕಾ ಪ್ರಕಟಣೆ
ದಿನಾಂಕ: 04-12-2017
ಹೆಂಗಸು ಕಾಣೆ
ದಿನಾಂಕ: 16-11-2017 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಮೆಳಗೋಡು ಗ್ರಾಮದ ವಾಸಿ ಶ್ರೀಮತಿ ಶಿವಮ್ಮ,
ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್
ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಶಿವಮ್ಮ, ರವರ ಪತಿ ಶ್ರೀ ಗಂಗೇಗೌಡ, ರವರು ದಿನಾಂಕ: 03-12-2017 ರಂದು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಶಿವಮ್ಮ ಕೋಂ ಗಂಗೇಗೌಡ, 45 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ, ಮನೆಯಿಂದ ಹೋಗು
ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-223935 ಕ್ಕೆ ಸಂಪರ್ಕಿಸುವುದು.
No comments:
Post a Comment