* * * * * * HASSAN DISTRICT POLICE

Friday, November 17, 2017

PRESS NOTE : 17-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 17-11-2017
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಾಚರಣೆ
ಕನ್ನಕಳವು ಪ್ರಕರಣದ ಆರೋಪಿ 2 ವರ್ಷದ ನಂತರ ಬಂಧನ
                            
      ಅರಸೀಕೆರೆ ನಗರ ಪೊಲೀಸ್ ಠಾಣೆ ಮೊ.ನಂ 229/12, 282/12, 208/13, 41/13, 33/13, 207/13, 209/13 ರಲ್ಲಿ ಎಲ್ ಪಿಸಿ ಪ್ರಕರಣಗಳಲ್ಲಿ ಸುಮಾರು 4 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಲ್‌ ಪಿ ಆರ್‌  ಪ್ರಕರಣದ ಆರೋಪಿಯಾದ ಮಣಿಕಂಠ @ ಮಣಿ ಬಿನ್ ನರಸಿಂಹ 33 ವರ್ಷ ಬಳೆಗಾರ ಜನಾಂಗ ಕೂಲಿ ಕೆಲಸ ಲಾಯಲಾ ಗ್ರಾಮ ದಕ್ಷಿಣ ಕನ್ನಡ ಜಿಲ್ಲೆ. ಹಾಲಿ ವಿಷ್ಣುನಗರ ನೀರಚಲ್ ಕಾಸರಗೋಡು ಜಿಲ್ಲೆ ಕೇರಳ ರಾಜ್ಯ. ಈತನನ್ನು ದಿನಾಂಕ: 16/11/2017 ರಂದು ಪತ್ತೆ ಮಾಡಿದ್ದು ಈ ಆರೋಪಿಯ ಮೇಲೆ  ಹಾಸನ ಜಿಲ್ಲೆಯ ಅರಸೀಕೆರೆ ನಗರ ಠಾಣೆಯ 7 ಪ್ರಕರಣಗಳು, ಬಂಟ್ವಾಳ, ಕುಶಾಲನಗರ, ಮಂಗಳೂರು ಗ್ರಾಮಾಂತರ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದ್ದು ಆಸಾಮಿಯು ಕೇರಳ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದು, ಈ ಆರೋಪಿಯನ್ನು ಪತ್ತೆಹಚ್ಚಲು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಪುರವಾಡ್, ಐಪಿಎಸ್ ರವರು, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜ್ಯೋತಿವೈdನಾಥ್, ರವರು ಹಾಗೂ  ಅರಸೀಕೆರೆ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸದಾನಂದ ಅ ತಿಪ್ಪಣ್ಣ, ರವರು  ಅರಸೀಕೆರೆ ಗ್ರಾಮಾಂತರ ವೃತ್ತದ ನಿರೀಕ್ಷಕರಾದ ಶ್ರೀ ಸಿದ್ದರಾಮೇಶ್ವರ ಎಸ್  ಹಾಗೂ ಅರಸೀಕೆರೆ ಗ್ರಾಮಾಂತರ ಠಾಣಾ ಪಿ.ಎಸ್.²æà ಪುರುಷೋತ್ತಮ್.ಜಿ ರವರ ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು.   

        ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಾದ ಶ್ರೀ ರಾಹುಲ್ ಕುಮಾರ್ ಶಹಪುರ್ವಾಡ್, ಐ.ಪಿ.ಎಸ್ ರವರ ಆದೇಶದಂತೆ ಶ್ರೀ ಸದಾನಂದ ಅ ತಿಪ್ಪಣ್ಣವರ ಡಿವೈ.ಎಸ್.ಪಿ. ಅರಸೀಕೆರೆ ಉಪ-ವಿಭಾಗ  ಇವರ ಮಾರ್ಗದರ್ಶನದಲ್ಲಿ ಶ್ರೀ ಸಿದ್ದರಾಮೇಶ್ವರ, ಸಿಪಿಐ ಅರಸೀಕೆರೆ ಗ್ರಾಮಾಂತರ ವೃತ್ತ ಪೊಲೀಸ್ ಇನ್ಸ್ಪೆಕ್ಟರ್ರವರ ನೇತೃತ್ವದಲ್ಲಿ ಅರಸೀಕೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಶ್ರೀ ಜಿ ಪುರುಷೊತ್ತಮ್ ಹಾಗೂ ಸಿಬ್ಬಂದಿಗಳಾದ ಹೆಚ್ಸಿ-243 ಹೀರಾಸಿಂಗ್, ಹೆಚ್ಸಿ-262 ಶಿವಕುಮಾರನಾಯ್ಕ, ಪಿಸಿ-422 ರವಿ, ಪಿಸಿ-243 ಮಂಜುನಾಥ್ ಎ,ಪಿಸಿ-279  ಪ್ರದೀಪ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಎ,ಪಿ,ಸಿ. ಪೀರ್ ಖಾನ್ ರವರುಗಳು ಸದರಿ ಎಲ್ಪಿಆರ್ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿರುತ್ತಾರೆ.
ಗಂಡಸು ಕಾಣೆ
     ದಿನಾಂಕ: 15-11-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಕೆ. ಗುಂಡೇಗೌಡನ ಕೊಪ್ಪಲು ಗ್ರಾಮದ ವಾಸಿ ಶ್ರೀ ನಾಗರಾಜ್, ರವರು ಕಾರು ಚಾಲಕರಾಗಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ನಾಗರಾಜ್, ರವರ ಪತ್ನಿ ಶ್ರೀಮತಿ ವೀಣಾ ನಾಗರಾಜ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀ ನಾಗರಾಜ್, 50 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.

No comments: