* * * * * * HASSAN DISTRICT POLICE

Thursday, November 16, 2017

PRESS NOTE : 16-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 16-11-2017.
ಜೂಜಾಡುತ್ತಿದ್ದ ಆರು ಜನರ ಬಂಧನ, ಬಂಧಿತರಿಂದ ಸುಮಾರು 4,515/- ನಗದು ವಶ:
        ದಿನಾಂಕ: 15-11-2017 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ದೇಖ್ಲಾ ಗ್ರಾಮದ ಉಮೇಶಚಾರ್, ರವರ ಮನೆಯ ಮುಂದಿನ ಹೊರಾಂಡದಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಶ್ರೀ ಜಗದೀಶ್, ಪಿಎಸ್ಐ ಸಕಲೇಶಪುರ ಗ್ರಾಮಾಂತರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಇಸ್ಮಾಯಲ್ ಬಿನ್ ಹಸೈನರ್, 40 ವರ್ಷ,ಕೌಡ್ಲಹಳ್ಳಿ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 2) ಉಮೇಶಚಾರಿ ಬಿನ್ ಕೇಶವಚಾರ್, 56 ವರ್ಷ, ದೇಖ್ಲಾ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 3) ಮೊಹಮದ್ ಅಶ್ರಫ್ ಬಿನ್ ಯೂಸಫ್, 37 ವರ್ಷ, ಆಟೋ ಡ್ರೈವರ್, ದೇಖ್ಲಾ ಗ್ರಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 4) ರವೀಂದ್ರ ಬಿನ್ ಮೋನಾಚಾರಿ, 43 ವರ್ಷ, ದೇಖ್ಲಾ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 5) ವಾಸುಮೂತರ್ಿ ಬಿನ್ ರಾಮಪ್ಪಗೌಡ, 53 ವರ್ಷ, ನಡಹಳ್ಳಿ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು 6) ಆದಂ ಬಿನ್ ಮೊಹಮದ್, 48 ವರ್ಷದೇಖ್ಲಾ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 4,515/- ನಗದನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಮಟ್ಕಾ-ಜೂಜು ಅಡ್ಡೆ ಮೇಲೆ ದಾಳಿ ಓರ್ವನ ಬಂಧನ, ಬಂಧಿತನಿಂದು ಸುಮಾರು 1,300/- ನಗದು ವಶ:
     ದಿನಾಂಕ: 15-11-2017 ರಂದು ಸಂಜೆ 4-15 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಸಕರ್ಾರಿ ಆಸ್ಪತ್ರೆ ಪಂಚರ್ ಅಂಗಡಿ ಹತ್ತಿರ  ಮಟ್ಕಾ- ಜೂಜಾಟಾಡುತ್ತಿದ್ದಾರೆಂದು ಶ್ರೀ ಕೆ. ಪ್ರಭಾಕರ್, ಪಿಐ, ಅರಸೀಕೆರೆ ನಗರ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ 1 ರೂ 80 ರೂಪಾಯಿ ಕೊಡುವುದಾಗಿ ಮಟ್ಕಾ-ಜೂಜಾಡುತ್ತಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಇಲಿಯಾಸ್ ಪಾಷ ಬಿನ್ ಅನ್ವರ್ ಸಾಬ್, 27 ವರ್ಷ, ಲಕ್ಷ್ಮೀಪುರ ಬಡಾವಣೆ, ಅರಸೀಕೆರೆ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,300/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಹುಡುಗಿ ಕಾಣೆ
     ದಿನಾಂಕ: 14-11-2017 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಮೂಡಲಹಿಪ್ಪೆ ಗ್ರಾಮದ ವಾಸಿ ಶ್ರೀ ರವಿ ರವರ ಮಗಳು ಕು|| ಮಧುರ, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವುದಿಲ್ಲ, ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಮಧುರಳ ತಂದೆ ಶ್ರೀ ರವಿ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಮಧುರ ಬಿನ್ ರವಿ, 20 ವರ್ಷ, 5 ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08175-273308ಕ್ಕೆ ಸಂಪರ್ಕಿಸುವುದು.



No comments: