* * * * * * HASSAN DISTRICT POLICE

Monday, November 13, 2017

PRESS NOTE : 11-11-2017

ಪತ್ರಿಕಾ ಪ್ರಕಟಣೆ            ದಿನಾಂಕ: 11-11-2017.

ಹೆಂಗಸು ಕಾಣೆ

          ದಿನಾಂಕ: 23-10-2017 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಹೊನ್ನವಳ್ಳಿ ಗ್ರಾಮದ ವಾಸಿ ಶ್ರೀ ಯತೀಶ್, ರವರ ಪತ್ನಿ ಶ್ರೀಮತಿ ಲತಾ, ರವರು ಆಲೂರಿಗೆ ಹೋಗಿ ಬಟ್ಟೆ ಹೊಲೆಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿ ಕೊಡಬೇಕೆಂದು ಶ್ರೀಮತಿ ಲತಾ, ರವರ ಪತಿ ಶ್ರೀ ಯತೀಶ್, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಶ್ರೀಮತಿ ಲತಾ ಕೋಂ ಯತೀಶ್, 21ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08170-218231 ಕ್ಕೆ ಸಂಪರ್ಕಿಸುವುದು. 

No comments: