* * * * * * HASSAN DISTRICT POLICE

Thursday, September 21, 2017

PRESS NOTE : 20-09-2017

ಪತ್ರಿಕಾ ಪ್ರಕಟಣೆ             ದಿನಾಂಕ: 20-09-2017
ಜಿಲ್ಲೆಯ ಎರಡು ಕಡೆ ಜೂಜಾಡುತ್ತಿದ್ದ  11 ಜನರ ಬಂಧನ, ಬಂಧಿತರಿಂದ 13,410/- ನಗದು ವಶ
ಪ್ರಕರಣ: 01.  ದಿನಾಂಕ: 18-09-2017 ರಂದು ಮಧ್ಯಾಹ್ನ 03-00 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಕೋಳಗುಂದ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು  ಸಿಪಿಐ ಶ್ರೀ ಸಿದ್ದರಾಮೇಶ್ವರ ಎಸ್. ಅರಸೀಕೆರೆ ಗ್ರಾಮಾಂತರ ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶೇಖರಪ್ಪ ಬಿನ್ ಲೇಟ್ ಚನ್ನಪ್ಪ, 64 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು 2) ರಾಜೇಗೌಡ ಬಿನ್ ಗಿರಿಗೌಡ, 73 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು 3) ಸದಾಶಿವ ಬಿನ್ ಷಣ್ಮುಖಯ್ಯ, 37 ವರ್ಷ, ಕೋಳಗುಂದ  ಗ್ರಾಮ, ಅರಸೀಕೆರೆ ತಾಲ್ಲೂಕು 4) ಪರಮೇಶ ಬಿನ್ ಪಾಪಣ್ಣ, 50 ವರ್ಷ, ಮೌತನಹಳ್ಳಿ ಗ್ರಾಮ, 50 ವರ್ಷ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು  ದಸ್ತಗಿರಿ ಮಾಡಿಕೊಂಡು  ಜೂಜಾಟದಲ್ಲಿ  ಪಣಕ್ಕಿಟ್ಟಿದ್ದ 3,760/- ನಗದನ್ನು ಅಮಾನತ್ತುಪಡಿಸಿಕೊಂಡು  ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಪ್ರಕರಣ: 02.  ದಿನಾಂಕ: 19-09-2017 ರಂದು  ಮಧ್ಯಾಹ್ನ 02-30 ಗಂಟೆ ಸಮಯದಲ್ಲಿ   ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಕುಪ್ಪಗೊಡು ಗ್ರಾಮದ ನಟರಾಜ ರವರ ಗಿರಣಿಯ ಹಿಂದೆ ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು  ಸಿಪಿಐ ಶ್ರೀ ಲೋಕೇಶ್  ಬೇಲೂರು ವೃತ್ತ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಗೋಪಾಲಕೃಷ್ಣ ಬಿನ್ ನಿಂಗಪ್ಪಗೌಡ, 69 ವರ್ಷ 2) ಸತೀಶಚಂದ್ರ ಬಿನ್ ರಾಮಕೃಷ್ಣ, 30 ವರ್ಷ 3) ನಟರಾಜ ಬಿನ್ ರಾಜೇಗೌಡ, 36 ವರ್ಷ 4) ಶಿವಕುಮಾರ ಬಿನ್ ಬಾಬು, 23 ವರ್ಷ 5) ಅಶೋಕ ಬಿನ್ ಅಣ್ಣಪ್ಪ ಶೆಟ್ಟಿ, 35 ವರ್ಷ 6) ಮಂಜುನಾಥ ಬಿನ್ ಜವರಯ್ಯ, 36 ವರ್ಷ 7) ಶಿವಪ್ಪ ಬಿನ್ ಬಾಬು, 30 ವರ್ಷ ಎಲ್ಲರೂ ಕುಪ್ಪಗೋಡು ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 9650/- ನಗದನ್ನು ಅಮಾನತ್ತುಪಡಿಸಿಕೊಂಡು  ಅರೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

 ಹೆಂಗಸು ಕಾಣೆ :     ದಿನಾಂಕ: 11-09-2017 ರಂದು ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೆಬೀಡು ಹೋಬಳಿ, ಮಲ್ಲಿಕಾಜರ್ುನಪುರ ಗ್ರಾಮದ  ಅಣ್ಣೇಗೌಡ ರವರ ಪತ್ನಿ ಶ್ರೀಮತಿ ಕಾಳಮ್ಮ ರವರು ಮನೆಯಿಂದ ಬೇಲೂರಿಗೆ ಆಸ್ಪತ್ರೆಗೆ ಹೋಗುವುದಾಗಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು  ಕಾಳಮ್ಮ ರವರ ಮಗ ಶ್ರೀ ನಂದೀಶ ರವರು ದಿನಾಂಕ: 19-09-2017 ರಂದು ಕೊಟ್ಟ ದೂರಿನ ಮೇರೆಗೆ  ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಕಾಳಮ್ಮ ಕೋಂ ಲೇಟ್  ಅಣ್ಣೇಗೌಡ, 60 ವರ್ಷ, 5'1'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಸೀರೆ, ಗುಲಾಬಿ ಬಣ್ಣದ ಸ್ವೆಟರ್ ಮತ್ತು  ತಲೆಗೆ ಕೆಂಪು ವಸ್ತ್ರವನ್ನು ಕಟ್ಟಿಕೊಂಡಿರುತ್ತಾರೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹಳೇಬೀಡು ಠಾಣೆ ಫೋನ್ ನಂ. 08177273201 ಕ್ಕೆ ಸಂಪರ್ಕಿಸುವುದು.

No comments: