* * * * * * HASSAN DISTRICT POLICE

Tuesday, September 19, 2017

PRESS NOTE : 19-09-2017

ಪತ್ರಿಕಾ ಪ್ರಕಟಣೆ             ದಿನಾಂಕ: 19-09-2017

ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಸಾವು

         ದಿನಾಂಕ: 18-09-2017 ರಂದು ರಾತ್ರಿ 7-30 ರಿಂದ 8-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್ ದಂಡಿಗನಹಳ್ಳಿ ಹೋಬಳಿ ಅಪ್ಪೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ನಂಜಮ್ಮರವರು ಎನ್ ಹೆಚ್ 75 ಬಿ ಎಂ ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ಇರುವ ರಸ್ತೆ ದಾಟುತ್ತಿದ್ದಾಗ ಚನ್ನರಾಯಪಟ್ಟಣದ ಕಡೆಯಿಂದ ಬಂದ ಯಾವುದೋ ಅಪರಿಚಿತ ವಾಹನ ಡಿಕ್ಕಿ ಮಾಡಿದ ಪರಿಣಾಮ ನಂಜಮ್ಮ ಕೋಂ ನಂಜುಂಡೇಗೌಡ, 70 ವರ್ಷ, ಅಪ್ಪೇನಹಳ್ಳಿ ಗ್ರಾಮ, ದಂಡಿಗನಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕ್ ರವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಜಗದೀಶ ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಅಪರಿಚಿತ ವಾಹನ ಟಿವಿಎಸ್ ಬೈಕಿಗೆ ಡಿಕ್ಕಿ ಬೈಕ್ ಸವಾರನ ಸಾವು

    ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಬೆಲವತ್ತಹಳ್ಳಿ ಗ್ರಾಮದ ಮಲ್ಲಿಕಾರ್ಜುನ ರವರ ಬಾಬ್ತು ಕೆಎ-01-ಹೆಚ್ಎ-958 ರ ಟಿವಿಎಸ್ ಎಕ್ಸ್ಎಲ್ ಮೊಪೈಡ್ ಬೈಕಿನಲ್ಲಿ ದೇವರ ಕಾರ್ಯಕ್ಕೆ ಕನಕಂಚೇನಹಳ್ಳಿಗೆ ಹೋಗಿ ವಾಪಸ್ ಊರಿಗೆ ಹೋಗಲು  ಅರಸೀಕೆರೆ ತಾಲ್ಲೂಕು, ಬೆಲವತ್ತಹಳ್ಳಿಯ ಮುಕಾರನ ಕಟ್ಟೆ ಹತ್ತಿರ  ಹಾಸನ-ಅರಸೀಕೆರೆ ರಸ್ತೆಯ ಎಡ ಭಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ  ಬಂದ ಯಾವುದೋ ವಾಹನದ ಚಾಲಕ  ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ಮಲ್ಲಿಕಾರ್ಜುನ ಬಿನ್ ಶಂಕರಪ್ಪ, 35 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ತಂದೆ ಶ್ರೀ ಶಂಕರಪ್ಪ ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.                     
ಹುಡುಗಿ ಕಾಣೆ
        ಬೆಂಗಳೂರು ದಕ್ಷಿಣ, ಚೌಡೇಶ್ವರಿನಗರ, ಕನಕಪುರ ರಸ್ರೆ, ನಂ 12ರ ವಾಸಿ ಶ್ರೀ ಚಂದ್ರಪ್ಪ ಬಿನ್ ಕೆಂಚೇಗೌಡರವರ ಮಗಳು ಕು|| ಶಿಲ್ಪ ಡಿ ಸಿ ರವರು ಈಗ್ಗೆ 2 ವರ್ಷಗಳಿಂದ ಹಾಸನ ಸಕರ್ಾರಿ ವಿಜ್ಞಾನ ಕಾಲೇಜಿನಲ್ಲಿ 2ನೇ ವರ್ಷದ ಬಿಸಿಎ ವ್ಯಾಸಾಂಗ ಮಾಡುಡಿಕೊಂಡು ಹಾಸನದ ಉದಯಗಿರಿಯ ಹತ್ತಿರ ಇರುವ ಮೆಟ್ರಿಕ್ ನಂತರದ ವಿದ್ಯಾಥರ್ಿನಿಯರ ಹಾಸ್ಟೆಲ್ ನಲ್ಲಿ ಉಳಿದುಕೊಂಡಿದ್ದು, ದಿನಾಂಕ: 14-09-2017 ರಂದು ಬೆಳಿಗ್ಗೆ ಹಾಸ್ಟೆಲ್ ನಿಂದ ಕಾಲೇಜಿಗೆ ಹೋದವಳು ವಾಪಸ್ ಹಾಸ್ಟೆಲ್ಗೆ ಬಂದಿರುವದಿಲ್ಲವೆಂದು ದಿನಾಂಕ: 15-09-2017 ರಂದು ಹಾಸ್ಟೆಲ್ ನ ವಾರ್ಡನ್ ತಿಳಿಸಿದ್ದು, ಇದುವರೆಗೂ ಕಾಣೆಯಾಗಿರುವ ನಮ್ಮ ಮಗಳನ್ನು ಎಲ್ಲಾ ಕಡೆ  ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪಿರ್ಯಾದಿ ಶ್ರೀ ಚಂದ್ರಪ್ಪ ಬಿನ್ ಕೆಂಚೇಗೌಡರವರು ನೀಡಿದ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಶಿಲ್ಪ.ಡಿ.ಸಿ ಬಿನ್ ಚಂದ್ರಪ್ಪ, 21 ವರ್ಷ, 5.2 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಬಾಷೆ ಮಾತನಾಡುತ್ತಾಳೆ. ಹಾಸ್ಟಲ್ ನಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08172-268967 ಕ್ಕೆ ಸಂಪರ್ಕಿಸುವುದು.
ಹುಡುಗಿ ಕಾಣೆ



       ಸಕಲೇಶಪುರ ತಾಲ್ಲೂಕ್ ಮಾವಿನಕೆರೆ ಕೋಲು ಗ್ರಾಮದ ವಾಸಿ ಶ್ರೀ ಪ್ರಶಾಂತ ಬಿನ್ ಲೇಟ್      ಬಾಬು ರವರ ತಂಗಿ ಕು|| ಸವಿತ ಬಿನ್ ಲೇಟ್ ಬಾಬು ರವರು ಕಳೆದ 5-6 ತಿಂಗಳ ಹಿಂದೆ ಉಪ್ಪಿನಂಗಡಿಗೆ ಯಾರದೋ  ಮನೆಯಲ್ಲಿ ಮನೆಗೆಲಸ ಮಾಡುತ್ತೇನೆಂದು ಹೇಳಿ ಹೋಗಿ ಅಲ್ಲಿಯೇ ಕೆಲಸ ಮಾಡಿಕೊಂಡಿದ್ದು, ಹೋದ ಕೆಲ ದಿನಗಳು ಪೋನ್ ಮಾಡುತ್ತಿದ್ದು, ನಂತರ ಈಗ 15 ದಿನಗಳಿಂದ ಯಾವುದೇ ಫೋನ್ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಇದುವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಪಿರ್ಯಾದಿ ಶ್ರೀ ಪ್ರಶಾಂತ್ ಬಿನ್ ಲೇಟ್ ಬಾಬುರವರು ನೀಡಿದ ದೂರಿನ ಮೇರೆಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಸವಿತ ಬಿನ್ ಲೇಟ್ ಬಾಬು, 20 ವರ್ಷ, 5 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕನ್ನಡ ಮತ್ತು ತುಳು ಬಾಷೆ ಮಾತನಾಡುತ್ತಾಳೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173-244100 ಕ್ಕೆ ಸಂಪರ್ಕಿಸುವುದು.

No comments: